Ad

Instant Grammar Checker - Correct all grammar errors and enhance your writing.

ಮೈಸೂರಿನಲ್ಲಿ ಎರಡನೆಯ ಕೊರೊನಾ ಪ್ರಕರಣ

ಮೈಸೂರು ನಗರ ತುರ್ತು ಪತ್ರಿಕಾಗೋಷ್ಠಿಯನ್ನು ದಿನಾಂಕ 23 03:20 20 ರಂದು ಬೆಳಿಗ್ಗೆ 11.45 ರಿಂದ 12 ರವರೆಗೆ  ಜಿಲ್ಲಾಧಿಕಾರಿಗಳು ನಡೆಸಿ ಈ ಕೆಳಕಂಡಂತೆ ಮಾತನಾಡುತ್ತಾರೆ ಹಾಗೂ ಪೊಲೀಸ್ ಕಮಿಷನರ್ ಮಾತನಾಡುತ್ತಾರೆ ಮೈಸೂರಿನಲ್ಲಿ ಮತ್ತೊಂದು ಕೊರೊನಾ ಪ್ರಕರಣ.
ಮೂಲತಃ ಕೇರಳದವರಲ್ಲಿ ಕೊರೊನಾ ವೈರಸ್ ಪತ್ತೆ.

ಸದ್ಯ ಕೆ.ಆರ್ ಆಸ್ಪತ್ರೆಯಲ್ಲಿರುವ ಸೋಂಕಿತರು.

21 ರಂದು ದುಬೈನಿಂದ ಕೊನೆಯ ವಿಮಾನದಲ್ಲಿ ಬಂದಿದ್ದರು.

ನೆನ್ನೆ 22ಕ್ಕೆ ಬೆಂಗಳೂರಿಗೆ ಬಂದಿದ್ದರು.

ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ಆಗಿದೆ
ಅಲ್ಲಿಂದ ಟ್ಯಾಕ್ಸಿಯಲ್ಲಿ ಮೈಸೂರಿಗೆ ಬಂದಿದ್ದಾರೆ.

ಮಧ್ಯದಲ್ಲಿ ಟೀ ಬ್ರೇಕ್ ತೆಗೆದುಕೊಂಡಿದ್ದಾರೆ
ಎಲ್ಲಿ ಅನ್ನೋದು ಗೊತ್ತಾಗಿಲ್ಲ.

ಮೈಸೂರಿಗೆ ಬಂದು ಕೆ.ಆರ್. ಆಸ್ಪತ್ರೆಗೆ ಹೋಗಿದ್ದಾರೆ.

ಮೀನಾ ಬಜಾರ್‌ನಲ್ಲಿ ಸ್ವಲ್ಪ ಹೊತ್ತು ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ರಿಂದ ಅಧಿಕೃತ ಮಾಹಿತಿ.
ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ವಿಚಾರ.

ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.

ಅನೇಕ ಕಡೆ ಅಂಗಡಿ ತೆರೆಯಲಾಗಿದೆ.

ಇವತ್ತು ಪೊಲೀಸರು ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡುತ್ತಾರೆ.

*ನಾಳೆಯಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು*

ಮೈಸೂರು ಜಿಲ್ಲಾಧಿಕಾರಿ ಎಚ್ಚರಿ ಲಾಕ್‌ಡೌನ್ ಆದೇಶ ಉಲ್ಲಂಘನೆ ಮಾಡಿದ್ರೆ ಕ್ರಿಮಿನಲ್ ಕೇಸ್.

ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಎಚ್ಚರಿಕೆ.

ಜನರು ಲಾಕ್‌ಡೌನ್ ಆದೇಶವನ್ನ ಲಘುವಾಗಿ ಪರಿಗಣಿಸಿದ್ದಾರೆ.

ಎಲ್ಲಂದರಲ್ಲಿ ಓಡಾಡುತ್ತಿದ್ದಾರೆ.
ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.

ಅಗತ್ಯ ವಸ್ತುಗಳ ಬಿಟ್ಟು ಬೇರೆ ಅಂಗಡಿಗಳು ತೆರೆದಿದ್ದಾರೆ.

ಇವೇಲ್ಲವು ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.

ಇಂತವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ.

ಜನ ಯಾಕೇ ಇದನ್ನ ಸಿರಿಯಸ್ ಆಗಿ ತಗೋಳ್ತಿಲ್ಲ ಅಂತ ನಮಗೆ ಗೊತ್ತಾಗುತ್ತಿಲ್ಲ.

ಇಂದಿನಿಂದ ಪೊಲೀಸರು ಮತ್ತಷ್ಟು ಗಂಭೀರವಾಗುತ್ತಾರೆ.

ಮೈಸೂರಿನಲ್ಲಿ ಎಲ್ಲ ಖಾಸಗಿ ವಾಹನ ನಿಷೇಧ.

ಓಲಾ ,ಉಬರ್, ಆಟೋ, ಎಲ್ಲವು ನಿಷೇಧ‌.

ಹೊರಜಿಲ್ಲೆಯಿಂದ ಬರುವ ಎಲ್ಲ ವಾಹನ ತಪಾಸಣೆ ಮಾಡ್ತಿವಿ‌.

ಅನಗತ್ಯ ಓಡಾಡ ಇದ್ದರೆ ಪ್ರಶ್ನೆ ಮಾಡ್ತಿವಿ.

ಉದ್ದೇಶ ಇಲ್ಲದೆ ಒಡಾಡಿದ್ರೆ ಕೇಸ್ ಹಾಕೋದು ಗ್ಯಾರೆಂಟಿ‌.

ಇನ್ನು 10 ದಿನಗಳ ಕಾಲ ಇವೇಲ್ಲವನ್ನು ಸಹಿಸಿಕೊಳ್ಳಬೇಕು.

ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ  ಇದೊಂದು ಎರ್ಮಜೆನ್ಸಿ ಸಮಯ.

ಇಂತಹ ಸಮಯದಲ್ಲಿ ತಮಾಷೆ, ಹಾಗೂ ಲೇವಡಿ ಸಲ್ಲದು.

ಪರಿಸ್ಥಿತಿ ವಿಕೋಪಕ್ಕೆ‌ ಹೋದರೆ ನಾವು ಏನು ಮಾಡಲು‌ ಆಗೋಲ್ಲ.

ಜನರು ನಿಮ್ಮ ನಿಮ್ಮ ಮನೆಯಲ್ಲಿಯೇ ಇರಿ.

ನಾವು ಈ ಕಾನೂನು‌ ಮಾಡ್ತಿರೋದು ನಿಮ್ಮ ಆರೋಗ್ಯಕ್ಕಾಗಿ.

ನಿಮಗೆ ಅಥವ ನಿಮ್ಮಿಂದ ಇನ್ನೊಬ್ಬರಿಗೆ ಹರಡದಂತೆ ನೋಡಿಕೊಳ್ಳಲು.

ಆದ್ರೆ ಇದನ್ನ ಸಹಜವಾಗಿ ತೆಗದುಕೊಂಡರೆ ಕೇಸು ದಾಖಲಿಸುತ್ತೇವೆ.

ಮೈಸೂರಿನಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಹೇಳಿಕೆ.
 ಮನೆಯಲ್ಲಿರುವಂತೆ ಹೇಳಿದ್ರು ಮನವಿಗೆ ಸ್ಪಂದಿಸದ ಹಿನ್ನಲೆ.

ಅನವಶ್ಯಕವಾಗಿ ತಿರುಗಾಡಿದ್ರೆ ಕೇಸ್ ಹಾಕಲು ಆದೇಶ.

ಐಪಿಎಸ್ ಸೆಕ್ಷನ್ (270)ಅಡಿಯಲ್ಲಿ ಕೇಸ್ ದಾಖಲು.

2ವರ್ಷ ಜೈಲು ಶಿಕ್ಷೆ ಹಾಗೂ ಈ ಪ್ರಕರಣಕ್ಕೆ ಜಾಮೀನು ಕೂಡ ಇಲ್ಲ.

ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಎಸ್ ಪಿ ರಿಷ್ಯಂತ್ ಹೇಳಿಕೆ.

ಮಳಿಗೆ ತೆರೆಯುವಂತಿಲ್ಲ, ಗುಂಪು ಸೇರುವಂತಿಲ್ಲ.

ಹಾಗೆ ಆದರೆ ಕೇಸ್ ಹಾಕೋದು ಖಂಡಿತ.

ಕೆಲವರು ಎಷ್ಟೇ ಹೇಳಿದರು ಕೇಳ್ತಿಲ್ಲ.
ಹೀಗೆ ಮಾಡಿದ್ರೆ ಒಂದತ್ತು ಜನಕ್ಕೆ ಕೇಸ್ ಆಗೋದಂತು ಪಕ್ಕ.
ಪುಂಡ ಯುವಕರಿಗೆ, ಅನವಶ್ಯಕವಾಗಿ ತಿರುಗೋ ಜನ್ರಿಗೆ ಖಡಕ್ ವಾರ್ನಿಂಗ್ ಕೊಟ್ಟ ಎಸ್‌ಪಿ.
 ಸೋಂಕಿತರೇಲ್ಲ ಒಂದೆ ಆಸ್ಪತ್ರೆಯಲ್ಲಿರುತ್ತಾರೆ.

ಮೈಸೂರು ಜಿಲ್ಲಾ ಆಸ್ಪತ್ರೆ ಐಸೋಲೇಷನ್ ಆಸ್ಪತ್ರೆಯಾಗಿ ಬಳಕೆ.
150 ಬೆಡ್ ವ್ಯವಸ್ಥೆ ಇರುವ ಜಿಲ್ಲಾಸ್ಪತ್ರೆ ಐಸೋಲೇಷನ್ ಆಸ್ಪತ್ತೆಯಾಗಿ ಪರಿವರ್ತನೆ.
ನಾಳೆಯಿಂದ ಎಲ್ಲ ಕೊರೋನಾ ಪಾಸಿಟಿವ್ ರೋಗಿಗಳು ಒಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ.
ಹೊಸ ಆಸ್ಪತ್ರೆ ಫುಲ್ ಆದ್ರೆ ಬಿಎಂಹೆಚ್ ಆಸ್ಪತ್ರೆಯಲ್ಲು ಐಸೋಲೇಷನ್ ಓಪನ್.
ಇನ್ನು 10 ಆಸ್ಪತ್ರೆ ನಮ್ಮ ಬಳಿ ಸಿದ್ದವಾಗಿದ್ದೆ‌.
ಯಾವುದೇ ಕ್ಷಣದಲ್ಲು ಕೊರೋನಾ ರೋಗಿಗಳಿಗೆ ಚಿಕಿತ್ಸೆಗೆ ಸಿದ್ದ.
ಮೈಸೂರು ಅಭಿರಾಮ್ ಜಿ.ಶಂಕರ್ ಹೇಳಿಕೆ.

Post a Comment

0 Comments