Ad

Instant Grammar Checker - Correct all grammar errors and enhance your writing.

COVID - 19 - ಮುನ್ನೆಚ್ಚರಿಕೆ ಕ್ರಮಗಳು


COVID - 19 - ಮುನ್ನೆಚ್ಚರಿಕೆ ಕ್ರಮಗಳು


ಸಮುದಾಯ ಕರೋನ ಸೋಂಕಿನ  ಪ್ರಭಾವ, ಭಾರತ ದಲ್ಲಿ  ಶೀಘ್ರದಲ್ಲೇ 3 ನೇ ಹಂತವನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲಿ  ಎಲ್ಲರೂ 
 ಮನೆ ಯಲ್ಲಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ ವಾಗಿದೆ.

 1. ನಾವು ತೆಗೆದುಕೊಳ್ಳುವ ಹಾಲಿನ ಪಾಕೆಟ್ ಗಳನ್ನು ಮನೆಗೆ ತಂದ ಕೂಡಲೇ ನೀರಿನಲ್ಲಿ ತೊಳೆದು ಸಂಗ್ರಹಿಸುವುದು ಮತ್ತು  ಕೈಗಳನ್ನು ತೊಳೆದುಕೊಳ್ಳುವುದು.

 2. ಮನೆಗೆ ಪತ್ರಿಕೆಗಳನ್ನು  ಪಡೆಯುವುದನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸುವುದು.

 3. ಕೊರಿಯರ್ ಮೂಲಕ ಪಡೆಯುವ ವಸ್ತುಗಳನ್ನು , ಒಂದು ನಿದಿ೯ಷ್ಟ ಸ್ಥಳದಲ್ಲಿ ಇಡಲು ಕೊರಿಯರ್ ನೀಡುವ ವ್ಯಕ್ತಿ ಗೆ ಸೂಚಿಸಿ, 24 ಗಂಟೆಗಳ ನಂತರ ತೆರೆಯುವುದು.

 4. ಮನೆ ಕೆಲಸದವರಿಗೆ ವೇತನ ಸಹಿತ ರಜೆ ನೀಡಿ ನಮ್ಮ ಕೆಲಸ ನಾವೇ ಮಾಡಿ ಕೊಳ್ಳುವುದು ಸೂಕ್ತ.

  5.ಅನಿವಾರ್ಯ ಸಂದರ್ಭದಲ್ಲಿ, ಮನೆ ಕೆಲಸದವರ ಸೇವೆ, ಅವಶ್ಯ ವಿದ್ದಲ್ಲಿ, ಅವರಿಗೆ ಸ್ವಚ್ಛತೆ ಮತ್ತು ಕರೋನ ಹರಡುವಿಕೆ ಬಗೆಗೆ ಮಾಹಿತಿ ನೀಡುವುದು. ಮುಖ್ಯ ಬಾಗಿಲನ್ನು ಮುಟ್ಟದೆ , ಕಾಲಿಂಗ್ ಬೆಲ್ ಉಪಯೋಗಿಸಲು ಸೂಚಿಸುವುದು. ಅವರಿಗೆ ಪ್ರತಿನಿತ್ಯ ಮಾಸ್ಕ್ ನೀಡಿ, ಕಾಯ೯ನಿವ೯ಹಿಸಲು ಸೂಚಿಸುವುದು, ಮತ್ತು ಬಂದ ಕೂಡಲೇ ಮತ್ತು ಆಗಾಗ್ಗೆ ಕೈತೊಳೆದುಕೊಳ್ಳಲು ಸೂಚಿಸುವುದು. ಮನೆಯ ಇತರೆ ವಸ್ತುಗಳನ್ನು ಮುಟ್ಟದಂತೆ ಸೂಚಿಸಿ, ಅವರು ಸ್ಪಶಿ೯ಸಿರುವ ಕಾಲಿಂಗ್ ಬೆಲ್ ಸ್ವಿಚ್ ಮತ್ತು ಕೈತೊಳೆಯದೇ ಮುಟ್ಟಿ ರುವ ಇತರ ಭಾಗಗಳನ್ನು ಸ್ವಚ್ಛ ಗೊಳಿಸಲು ಸೂಚಿಸುವುದು.

6.ನಾವು ಮನೆಗೆ ತಂದ ನಂತರ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳನ್ನು ಕೂಡಲೇ ತೊಳೆದು ಸಂಗ್ರಹಿಸುವುದು.

 5. ರಿಮೋಟ್, ಫೋನ್ ಮತ್ತು ಕೀಬೋರ್ಡ್‌ಗಳು ನಮ್ಮ ಮನೆಯಲ್ಲಿ ಹೆಚ್ಚು ಕಲುಷಿತ ಅಂಶಗಳಾಗಿವೆ.  ಶುಚಿಗೊಳಿಸುವ ದ್ರವವನ್ನು ಬಳಸಿ ದಿನಕ್ಕೆ ಒಮ್ಮೆಯಾದರೂ ಅವುಗಳನ್ನು ಸ್ವಚ್ಛಗೊಳಿಸುವುದು.

 6. ಮನೆಯಲ್ಲಿ ಅಥವಾ ಕಚೇರಿಯಲ್ಲಿದ್ದಾಗ ಆಗಾಗ್ಗೆ  ಪ್ರತಿ ಗಂಟೆ ಗೊಮ್ಮೆ ಕೈ ತೊಳೆಯುವುದು. 

 7. ಮನೆ ಬಿಟ್ಟು ಹೊರಗಿನ ಎಲ್ಲಾ ಪ್ರಯಾಣ ವನ್ನು ತಾತ್ಕಾಲಿಕ ವಾಗಿ ಮುಂದೂಡುವುದು. ಅನಿವಾರ್ಯ ಪ್ರಯಾಣ ದಲ್ಲಿ ಸಾರ್ವಜನಿಕ ಸಾರಿಗೆಯನ್ನು ಸಾಧ್ಯವಾದಷ್ಟು ಉಪಯೋಗಿಸಬಾರದು.   ಸ್ವಂತ ವಾಹನ ಅಥವಾ ಓಲಾ ಮತ್ತು ಉಬರ್ ಅನ್ನು ಸಹ ಬಳಸಬಹುದು.

 8. ಜಿಮ್‌ಗಳು, ಈಜುಕೊಳ ಮತ್ತು ಇತರ ವ್ಯಾಯಾಮ ಅಭ್ಯಾಸ ಗಳನ್ನು ತಾತ್ಕಾಲಿಕ ವಾಗಿ ನಿಲ್ಲಿಸುವುದು.

 9. ಬೋಧನೆಗಳು, ನೃತ್ಯ / ಸಂಗೀತ ತರಗತಿಗಳು ಇತ್ಯಾದಿಗಳನ್ನು ತಾತ್ಕಾಲಿಕ ವಾಗಿ ನಿಲ್ಲಿಸುವುದು.

10. ಕಚೇರಿ ಕೆಲಸಗಳನ್ನು ಮನೆಯಲ್ಲಿ ಮಾಡುವುದು ಅಥವಾ ರಜೆ ಪಡೆದು ಮನೆ ಯಲ್ಲಿರುವುದು.

11. ವಾಡಿಕೆಯ ವಾಕಿಂಗ್ ವ್ಯಾಯಾಮಕ್ಕೆ ಹೋಗುವುದನ್ನು ನಿಲ್ಲಿಸಿ ಮನೆಯಲ್ಲೇ ಮಾಡಿ ಕೊಳ್ಳುವುದು.

12. ಒಟ್ಟಿನಲ್ಲಿ ಹೇಳುವುದಾದರೆ ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೆ ಇರುವುದು ಸೂಕ್ತ.

13.ನಾನು ಸದೃಢವಾಗಿ ದ್ದೇನೆ, ಆರೋಗ್ಯ ವಾಗಿದ್ದೇನೆ, ನಮ್ಮ ಊರಿನಲ್ಲಿ ಕರೋನ ಸೋಂಕಿತರು ಇಲ್ಲ, ಮನೆ ಇಂದ ಸ್ವಲ್ಪ ಸಮಯ ಹೊರಗೆ ಹೋಗಿ ಬಂದರೆ ಏನೂ ಆಗುವುದಿಲ್ಲ , ಎಂಬ ನಿಲ೯ಕ್ಷ ಮನೋಭಾವ, ಉಡಾಫೆ ಸಲ್ಲದು.

14.ಮನೆಯಲ್ಲಿನ ಎಲ್ಲಾ ಸಭೆ ಸಮಾರಂಭಗಳನ್ನು ಮುಂದೂಡುವುದು ಸೂಕ್ತ.ಹಾಗೂ  ಸ್ನೇಹಿತರು ಗಳು ಮತ್ತು ಸಂಭಂದಿಕರು ಗಳ ಸಮಾರಂಭಗಳಿಗೆ, ಇತರ ಸಂಸ್ಥೆ ಗಳ ಸಭೆಗಳಿಗೆ ಭಾಗವಹಿಸದೇ ಇರುವುದು, ನಮ್ಮ ಕುಟುಂಬದವರಿಗೆ ಮತ್ತು ಇತರೆ ಯವರಿಗೆ ಕರೋನ ಹರಡುವುದನ್ನು ತಡೆಗಟ್ಟಲು ಅನಿವಾರ್ಯ ಎಂದು ಭಾವಿಸುವುದು.

15.ಕರೋನ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸಕಾ೯ರ ಸೂಚಿಸುವ ಎಲ್ಲಾ ರೀತಿಯ ಮಾಗ೯ಸೂಚಿಗಳನ್ನು ಪಾಲಿಸಿ ಸಹಕರಿಸುವುದು, ಎಲ್ಲಾ ಸಭ್ಯ ಗೌರವಾನ್ವಿತ ನಾಗರೀಕರ ಕತ೯ವ್ಯವಾಗಿರುತ್ತದೆ.

Post a Comment

0 Comments